ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು
ಕಳೆದ ಎರಡು–ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ–ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವಾದ ಕೆಲವು ಸೈದ್ಧಾಂತಿಕ ಧಾರೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.