• -39%

    ತಲಲಂ ಪಂ ಪಂ 

    0

    ತಲಲಂ ಪಂ ಪಂ
    (ಮಕ್ಕಳ ಕವನಗಳು)
    ಶ್ರೀಮತಿ ಶ್ವೇತಾ ನರಗುಂದ ಅವರ ‘ಕಿಂಕಿಣಿ’ ಕವನ ಸಂಕಲನವನ್ನು 2006 ರಲ್ಲಿ ಜಡಭರತ ಪ್ರಕಾಶನದಿಂದ ಪ್ರಕಟಿಸಲಾಗಿತ್ತು. ಕಳೆದ 2-3 ವರ್ಷಗಳಲ್ಲಿ ಅವರ ಸೃಜನಶೀಲ ಪ್ರಕ್ರಿಯೆ ಮಕ್ಕಳ ಓಲೈಕೆಯ ಹಿನ್ನೆಲೆಯಲ್ಲಿ ಅವರಿಗಾಗಿ ಗುಣುಗುಣಿಸುತ್ತಿರುವ ಲಾಲಿ ಪದ್ಯಗಳ ಜೊತೆಗೆ ಶಬ್ದಗಳ ಕಿಂಕಿಣಿ ನಾದವನ್ನು ಶಬ್ದಗಳಲ್ಲಿ ಹಿಡಿದಿಟ್ಟು ಇತರರಿಗೂ ನೀಡುವಂತೆ ಪ್ರಯತ್ನಿಸಿದ್ದಾರೆ.

    Original price was: $0.36.Current price is: $0.22.
    Add to cart
  • -40%

    ಕರ್ಣಾಟಕ ಭಾಗವತ – 1

    0

    ಕರ್ಣಾಟಕ ಭಾಗವತ
    ಪ್ರಥಮ ಸಂಪುಟ (೧-೯ ಸ್ಕಂಧಗಳು)
    ತಾಳೆಗರಿಗಳಲ್ಲಿದ್ದ ‘ಕರ್ಣಾಟಕ ಭಾಗವತ’ದ ಬರವಣಿಗೆಯನ್ನು ಗ್ರಂಥರೂಪದಲ್ಲಿ ಹೊರತರುವ ‘ಕಲ್ಪನೆ ಹಾಗೂ ಅದರ ಪೂರ್ವ-ವೃತ್ತಾಂತ ಹೀಗಿದೆ. ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ಗ್ರಾಮದ ತಮ್ಮ ಪುರಾತನ ಕಾಲದ ಮನೆಯಲ್ಲಿ ‘ನಿತ್ಯಾತ್ಮ ಶುಕಯೋಗಿ’, ವಿರಚಿತ ಕನ್ನಡ ಭಾಗವತ ಮಹಾಕಾವ್ಯವನ್ನು ಅವರ ವಂಶದ ಪೂರ್ವಿಕರಾದ ‘ಶ್ರೀ ರಾಮಣ್ಣಯ್ಯವರು’ ೧೭೫೫ ರಲ್ಲಿ ತಾಳೆಗರಿಯಲ್ಲಿ ಬರೆದ್ದರು. ಈ ಬೃಹತ್ಗ್ರಂಥದ ಇರುವಿಕೆಯ ಬಗ್ಗೆಯೂ, ಚಂದ್ರಶೇಖರ್, ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. ೧೯೯೧ ರಲ್ಲಿ ಅಂರ್ತರಾಷ್ಟ್ರೀಯ ಸಮ್ಮೆಳನದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಾಗ, ಇವುಗಳ ಇರುವಿಕೆಯ ಅರಿವಾಯಿತು. ನಮ್ಮ ಭಾರತದೇಶದ ಪುರಾತನ ಸಂಸ್ಕೃತಿಯ ಕುರುಹಾಗಿ ಗ್ರಂಥವನ್ನು ನೋಡಿದೊಡನೆಯೇ, ಅದನ್ನು ಪರಿಷ್ಕರಿಸಿ ನವೀನ ರೀತಿಯ ಮುದ್ರಣದಲ್ಲಿ ತರುವ ಉತ್ಕಟವಾದ ಆಕಾಂಕ್ಷೆಗಳು ಬಂದವು. ೨೩೨ ತಾಳೆಗರಿಗಳ ಚಿಕ್ಕ ಅಕ್ಷರಗಳಲ್ಲಿ ಬರೆದ ಸುಮಾರು ೧೨,೦೦೦, ಭಾಮಿನಿ ಷಟ್ಪದಿಯ ಪದ್ಯಗಳನ್ನು ಪರಿಷರಿಸುವ ಕಾರ್ಯ ೧೯೯೨ ರಲ್ಲಿ ಪ್ರಾರಂಭವಾಗಿ ೨೦೦೮ ಸಂಪನ್ನವಾಯಿತು. ಸುಮಾರು ೫೦೦ ವರ್ಷಗಳ ಹಿಂದೆ ರಚಿಸಿದ ತಾಳೆಗರಿ ಗ್ರಂಥಗಳಿಂದ ಉಳಿದು ಬಂದ ಈ ಮಹಾಕಾವ್ಯವನ್ನು ೨ ಸಂಪುಟಗಳಲ್ಲಿ ಸಂಪಾದಿಸಿ, ಕನ್ನಡದ ಓದುಗರಿಗೆ ಅರ್ಪಿಸಿದ್ದಾರೆ.

    Original price was: $12.01.Current price is: $7.20.
    Add to cart
  • -42%

    ಗರ್ಭಗುಡಿಯ ಶಿಶು ಚೇತನ

    0

    ಗರ್ಭಗುಡಿಯ ಶಿಶು ಚೇತನ
    ಶ್ರೀಮತಿ ಪರಿಮಳಾರಾವ್ ಅವರು ಹನಿಗವನ, ಹಾಯಿಕುಗಳನ್ನಷ್ಟೇ ಅಲ್ಲ, ನೀಳ್ಗವನಗಳನ್ನು ಬರೆಯಬಲ್ಲರೆಂಬುದಕ್ಕೆ ‘ಗರ್ಭಗುಡಿಯ ಶಿಶುಚೇತನ’ ಎಂಬ ನೀಳ್ಗವನ ಒಂದು ಅತ್ಯುತ್ತಮ ನಿದರ್ಶನ. ಈ ಕವನದಲ್ಲಿ ಕವಿಯತ್ರಿ , ಕೂಸು, ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ, ಹಾಗೂ ಮಾತೆಯ ಮಮತೆಯ ಭಾವನೆಗಳನ್ನು ತುಂಬಾ ಅಪ್ಮಾಯಮಾನವಾಗಿ ವರ್ಣಿಸಿದ್ದಾರೆ. ಸೃಷ್ಟಿಯ ಸೊಬಗಿನ ಸುಂದರ ಚಿತ್ರಣ ಇಲ್ಲಿದೆ.

    Original price was: $0.24.Current price is: $0.14.
    Add to cart
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to cart
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to cart
  • -40%

    ಕರಾಳ ಗರ್ಭ

    0

    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to cart
  • -40%

    ಸುವರ್ಣ ಕರಾವಳಿ

    0

    ಸುವರ್ಣ ಕರಾವಳಿ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದೆ.

    Original price was: $0.83.Current price is: $0.50.
    Add to cart
  • -40%

    ಮಾತು ಮೌನ

    0

    ಮಾತು ಮೌನ
    ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ಕವಿಗೋಷ್ಟಿಗಳಲ್ಲಿ ವಾಚಿಸಲೆಂದೇ ರಚಿಸಿದ ಕವಿತೆಗಳಿವು. ಈ ಕವನ ಸಂಕಲನದಲ್ಲಿ ನಿಸರ್ಗ ಪ್ರೇಮ, ಜೀವನ ಸೌಂದರ್ಯ , ಬದುಕಿನ ಬವಣೆ, ಹೆಣ್ಣಿನ ಶೋಷಣೆ, ಸಾಂಸ್ಕೃತಿಕ ಚಿಂತನೆ, ಪ್ರೀತಿ ಪ್ರೇಮ , ನಾಡು ನುಡಿ , ದೇಶಭಕ್ತಿ , ಗಣ್ಯವ್ಯಕ್ತಿ , ಹಾಗೂ ‘ಅಹಲ್ಯ’ ಎಂಬ ಕಿರುಕಥನಗೀತೆ, ಭಕ್ತಿಗೀತೆ, ಹೀಗೆ ಸಾಕಷ್ಟು ವೈವಿಧ್ಯತೆಯನ್ನು ಕಾಣುತ್ತೇವೆ. ಇವರು ಸಾಹಿತ್ಯದ ದೋಣಿಯನ್ನು ನಡೆಸುವಲ್ಲಿ ಗದ್ಯ ಪದ್ಯದ ಹುಟ್ಟನ್ನು ಹಾಕಿದ್ದಾರೆ.

    Original price was: $1.08.Current price is: $0.65.
    Add to cart
  • -40%

    ಮುಳುಗುವ ಕೊಳ

    0

    ಮುಳುಗುವ ಕೊಳ
    ಈ ಕಾದಂಬರಿಯನ್ನು ನಾಗೇಶ ಕುಮಾರ ಸಿ ಎಸ್ ಅವರು ಬರೆದಿದ್ದಾರೆ. ಇದು  ಒಂದು ರಹಸ್ಯಮಯ  ಪತ್ತೇದಾರಿ ಕಾದಂಬರಿಯಾಗಿದ್ದು ಪೊಲೀಸರು ಕೊಲೆಗಾರರನ್ನು ಹೇಗೆ ಪತ್ತೆ ಮಾಡುತ್ತಾರೆ ಎಂಬುದನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ. ಕೊಲೆಗಾರರು ಪೋಲೀಸರ ಜೊತೆಯಲ್ಲೇ ಇದ್ದು ಪೊಲೀಸರಿಗೆ ಯಾವುದೇ ರೀತಿಯ ಸಂಶಯ ಬರದಂತೆ ನಡೆದುಕೊಂಡು ಅವರು  ಯಾವ ರೀತಿ  ದಾರಿ ತಪ್ಪಿಸಲು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಹೀಗಾಗಿ ಈ ಕಾದಂಬರಿಯು ತುಂಬಾ ಕುತೂಹಲಕಾರಿಯಾಗಿದೆ.

    Original price was: $0.83.Current price is: $0.50.
    Add to cart
  • -40%

    ರಾಜಕೀಯ ಮತ್ತು ಧರ್ಮ

    0

    ರಾಜಕೀಯ ಮತ್ತು ಧರ್ಮ

    ಲೇಖನಗಳು ತಮ್ಮ ವಸ್ತುವನ್ನು ಬೆಳಗಿಸುತ್ತವೆ. ಅದಕ್ಕಿಂತ ಹೆಚ್ಚಾಗಿ ಲೇಖಕನ ವ್ಯಕ್ತಿತ್ವದ ಬಗ್ಗೆ ಕೂಡ ಕೆಲ ಮಾತುಗಳನ್ನೂ ಹೇಳುತ್ತವೆ. ಈ ದೃಷ್ಟಿಯಿಂದ ಓದುಗರು ಇವುಗಳನ್ನು ಸ್ವೀಕರಿಸಬೇಕು. ಒಟ್ಟಿನಲ್ಲಿ ಹೇಳುವದಾದರೆ ಸುತ್ತಲಿನ ಜಗತ್ತಿನೊಡನೆ ನಡೆದ ಒಂದು ನಿರಂತರ ಪ್ರತಿಕ್ರಿಯೆಯ ಫಲವಾಗಿ ಈ ಲೇಖನಗಳು ಮೂಡಿಬಂದಿದೆ.

    Original price was: $1.08.Current price is: $0.65.
    Add to cart
  • -25%

    ಮಾತುಕತೆ ೧೧೧

    0

    ಮಾತುಕತೆ ೧೧೧
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ಆಗಸ್ಟ್ ೨೦೧೪
    ವರ್ಷ ಇಪ್ಪತ್ತೆಂಟು
    ಸಂಚಿಕೆ ಮೂರು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    Original price was: $0.24.Current price is: $0.18.
    Add to cart
  • -25%

    ಮಾತುಕತೆ ೧೧೨

    0

    ಮಾತುಕತೆ ೧೧೨
    ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ ೫೭೭ ೪೧೭

    ನವೆಂಬರ್  ೨೦೧೪
    ವರ್ಷ  ಇಪ್ಪತ್ತೆಂಟು
    ಸಂಚಿಕೆ  ನಾಲ್ಕು

    ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
    (ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
    ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
    ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    • ವೈಚಾರಿಕ ಆಕೃತಿಗಳ ಸಾಂಸ್ಕೃತಿಕ ನೆಲೆ ಮತ್ತು ರಾಜಕೀಯ ಭಿತ್ತಿ
    • ಅಥಾತೋ ಭಾರತಜಿಜ್ಞಾಸಾ
    • ರಾಮಾನುಜನ್ ಲೇಖನದ ವಿನ್ಯಾಸ
    • ಶೀರ್ಷಿಕೆಯ ಪ್ರತಿಪದಾರ್ಥ
    • ಕಾವ್ಯಯೋಗ ಸ್ಪಂದನ
    • ಆತಂಕ – ಸಮಾಧಾನ
    • ಆಶಯದ  ನಿರ್ವಚನ
    • ಭಾರತೀಯ ಚಿಂತನಕ್ರಮ : ಒಂದು ಸ್ಪಷ್ಟೀಕರಣ 
    • ನಮ್ಮ ಸಂವಿಧಾನದಲ್ಲಿ ಗಾಂಧಿ ವಿಚಾರಧಾರೆ
    • ನಾಗಚಂದ್ರನ ರಾಮಾಯಣದಲ್ಲಿ ಕಥಾಂತರ
    Original price was: $0.24.Current price is: $0.18.
    Add to cart