ರಾಜಧರ್ಮ-ರಾಜನೀತಿ:೨
ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ. ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.