• -40%

    ದೇಸಗತಿ

    0

    ದೇಸಗತಿ ಇದು ಶ್ರೀ ರಾಘವೇಂದ್ರ ಪಾಟೀಲರು ಬರೆದ ಕಥೆಗಳನ್ನೊಳಗೊಂಡಿದೆ. ಇದು ದೇಸಿ ಕಥೆಗಳಾಗಿವೆ. ಇವುಗಳಲ್ಲಿ ಹಳ್ಳಿಯ ಭಾಷೆ, ಜೀವನ ಅಡಕವಾಗಿದೆ.

    Original price was: $1.56.Current price is: $0.94.
    Add to cart
  • -40%

    ಅವ್ಯಕ್ತ

    0

    ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಒಂದು ಸಾಮಾನ್ಯ ಸಂಗತಿ. ಮನಸ್ಸಿನಲ್ಲಿ ಹೊಳಹುಹಾಕಿದ ಈ ವಿಚಾರಗಳು ಆಕೃತಿ ಪಡೆದು ಕಾದಂಬರಿಯಾಗಿದೆ.

    Original price was: $1.56.Current price is: $0.94.
    Add to cart
  • -40%

    ಕೇರಳ ಕಾಂತಾಸಮ್ಮಿತ

    0

    ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕೃತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ – “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನಾ ಸಂಚಯ’(mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

    Original price was: $3.12.Current price is: $1.87.
    Add to cart
  • -40%

    ಓ ಹೆನ್ರಿ ಕಥೆಗಳು

    0

    ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

    Original price was: $1.92.Current price is: $1.15.
    Add to cart
  • -40%

    ಉಮೇದುವಾರರು

    0

    ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ “ಉಮೇದುವಾರರು”.
    ಡಾ. ಲೋಹಿತ್ ನಾಯ್ಕರ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಒಳಹೊರಗನ್ನು ಬಲ್ಲವರಾಗಿದ್ದಾರೆ. ಹಾಗಾಗಿ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಈ ಕಾದಂಬರಿಯ ಕಥಾವಸ್ತುವಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಅಧಿಕೃತತೆ ದಕ್ಕಿರುವುದರಿಂದ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಹೈದರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟದ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡ ಮತ್ತು ಸಾರಾಯಿ ಇವುಗಳ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳಾಗಬಲ್ಲವು ಎಂಬುದನ್ನು ಅತ್ಯಂತ ನವಿರಾದ ಹಾಗೂ ಲವಲವಿಕೆಯ ಭಾಷೆಯಲ್ಲಿ ಲೋಹಿತ್ ಹಿಡಿದಿಟ್ಟಿದ್ದಾರೆ.

    Original price was: $3.00.Current price is: $1.80.
    Add to cart
  • -40%

    ಸಾವಿನ ಸೆರಗಿನಲ್ಲಿ

    0

    ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಡಾ. ಡಿ. ವಿ. ಗುರುಪ್ರಸಾದರು “ಸಾವಿನ ಸೆರಗಿನಲ್ಲಿ” ಎಂಬ ಕುತೂಹಲಕಾರಿ ಕೃತಿಯನ್ನು ರಚಿಸಿದ್ದಾರೆ. ಮರಣದಂಡನೆಗೀಡಾದ ಪ್ರತಿಯೊಬ್ಬ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿ ಅಪರಾಧಿಗಳ ಮನಸ್ಸಿನ ಒಳಸುರುಳಿಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಪಾಪಿಗಳ ಲೋಕಕ್ಕೆ ಕ್ಷ-ಕಿರಣವನ್ನು ಬೀರಿದ್ದಾರೆ. ಒಟ್ಟು 14 ಕತೆಗಳು ಇಲ್ಲಿ ನಿರೂಪಿಸಿದ್ದಾರೆ.

    Original price was: $2.40.Current price is: $1.44.
    Add to cart
  • -40%

    Seasons Heart Beat

    0

    It is a collection of Haiku Poems by G.R. Parimala Rao.

    Original price was: $0.60.Current price is: $0.36.
    Add to cart
  • -40%

    ಚಿತ್ತ ಚಿತ್ತಾರ

    0

    ಈ ಕೃತಿಯು ಶ್ರೀಮತಿ ಮಾಲತಿ ಮುದಕವಿಯವರು ಬರೆದ ಕಥೆಗಳನ್ನು ಒಳಗೊಂಡಿದೆ. ಮಹಿಳೆಯರ ಜೀವನದ ವಾಸ್ತವ ಚಿತ್ರಣ, ಬದಲಾದ ಪರಿಸ್ಥಿತಿಯಲ್ಲಿಯೂ ಮುಂದೆ ಸಾಗಿದ ಗಂಡು-ಹೆಣ್ಣಿನಲ್ಲಿಯ ತಾರತಮ್ಯ, ಹೆಣ್ಣಿನ ಅಸಹಾಯಕ ಸ್ಥಿತಿ, ಅಸ್ತಿತ್ವಕ್ಕೆ ಬಂದ ಹೊಸ ಸಮಸ್ಯೆಗಳು – ಇವೆಲ್ಲವುಗಳಿಗೆ ಪ್ರಸ್ತುತ ಕಥಾ ಸಂಕಲನವು ತನ್ನದೇ ಆದ ವಿಶಿಷ್ಟ ಕನ್ನಡಿಯನ್ನು ಹಿಡಿಯುತ್ತದೆ.

    Original price was: $1.20.Current price is: $0.72.
    Add to cart
  • -40%

    ನೆನಪಲ್ಲಿ ನಿಂತವರು

    0

    ಈ ಕೃತಿಯು ಶ್ರೀ ವಿಷ್ಣು ನಾಯ್ಕ ಅವರು ಸಂಪಾದಿಸಿದ ಕೆಲವು ಸಾಧಕರ ಜೀವನವನ್ನು ಪರಿಚಯಿಸುವ ಲೇಖನಗಳನ್ನು ಒಳಗೊಂಡಿದೆ.

    Original price was: $1.50.Current price is: $0.90.
    Add to cart
  • -40%

    ಮೂರು ಸಂಜಿ ಮುಂದ ಧಾರವಾಡ

    0

    ಮೂರು ಸಂಜಿ ಮುಂದ ಧಾರವಾಡ:

    ಈ ಕೃತಿಯು ಶ್ರೀ ಮಲ್ಲಿಕಾರ್ಜುನ ಹಿರೇಮಠರ ಧಾರವಾಡದ ಸವಿನೆನಪುಗಳ ಕುರಿತಾದ ಅನುಭವಗಳ ಲಲಿತ ಪ್ರಬಂಧಗಳನ್ನು ಒಳಗೊಂಡಿದೆ.

    Original price was: $1.14.Current price is: $0.68.
    Add to cart
  • -40%

    ಹರಿದ ಸ್ಕರ್ಟಿನ ಹುಡುಗಿ

    0

    ಹರಿದ ಸ್ಕರ್ಟಿನ ಹುಡುಗಿ ಈ ಕೃತಿಯು ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನವಾಗಿದೆ. ಈ ಕವನಗಳು ಅವರು ಕಂಡ, ಅನುಭವಿಸಿದ ಬದುಕಿನ ಸಂದರ್ಭ, ವೇದನೆ-ಸಂವೇದನೆಗಳನ್ನು ಒಳಗೊಂಡಿವೆ.

    Original price was: $0.48.Current price is: $0.29.
    Add to cart
  • -40%

    ಹೆಚ್.ವೈ.ಶಾರದಾಪ್ರಸಾದ

    0

    ಇದು ಕೆ. ಸತ್ಯನಾರಾಯಣ ಅವರು ಸಂಪಾದಿಸಿರುವ ಹೆಚ್.ವೈ.ಶಾರದಾಪ್ರಸಾದರ ಜೀವನದ ಕುರಿತಾದ ಕಿರು ಹೊತ್ತಿಗೆಯಾಗಿದೆ.

    Original price was: $0.72.Current price is: $0.43.
    Add to cart