• -10%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ :

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಆಸಕ್ತಿ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.
    ಹಾಗೆಂದು ಇವು ಮಾನವ ಹಕ್ಕುಗಳು ಮತ್ತು ಜೀವನ ಸಂದರ್ಭಗಳ ಸಮಸ್ಯಾತ್ಮಕತೆಯನ್ನು ಉದಾಹರಿಸುವ ಕೇಸ್ ಹಿಸ್ಟರಿಗಳಲ್ಲ. ಸಮಸ್ಯೆಗಳ ಹಿಂದಿನ ತೊಡಕಾದ ಮಾನವೀಯ ಸಂಬಂಧಗಳ ಸಹನುಭುತಿಪರವಾದ ತಿಳುವಳಿಕೆಯೊಂದಿಗೆ ಹದವಾದ ಸೃಜನಶೀಲತೆಯನ್ನು ಮೇಳೈಸಿಕೊಂಡ ವಿಶಿಷ್ಟ ಬರಹಗಳಾಗಿವೆ. ಕಾಯಿದೆಯ ತಿಳುವಳಿಕೆಯೊಂದೇ ಇವುಗಳ ಹೆಚ್ಚಳವಲ್ಲ.ಅದಕ್ಕೆ ಲೋಹಿತ್ ಅವರು ತೋರಿರುವ ಸಹಜ ಸೃಜನಶೀಲತೆ ಮತ್ತು ಬದುಕಿನ ಅರ್ಥಪೂರ್ಣತೆಯ ಬಗೆಗಿನ ಕಳಕಳಿ ಮಹತ್ವದವಾಗಿವೆ.

    ವೈವಿಧ್ಯಪೂರ್ಣವಾದ ಸಂದರ್ಭ, ಪರಿಸರ, ಜೀವನನಿರೀಕ್ಷಣೆ, ಪ್ರಯೋಗಶೀಲತೆಗಳು ಕತೆಗಳ ಹರವನ್ನು ಹೆಚ್ಚಿಸಿವೆ. ಸೃಜನಶೀಲತೆಯ ಕೈ ಮೇಲಾಗಿ, ಸಮಸ್ಯೆಗಳು ಧ್ವನಿಪೂರ್ಣ ಬರಹಗಳಾದಾಗ ಅವರ ಕತೆಗಳು ಹೆಚ್ಚು ಯಶಸ್ವಿಯಾಗಿವೆ. ಹಾಗಾಗಿ ಇವು ಸಾಹಿತ್ಯಕವಾಗಿಯೂ ಕುತೂಹಲಕರ ಪ್ರಯೋಗಗಳಾಗಿವೆ .

    Original price was: $0.84.Current price is: $0.76.
    Add to cart
  • -10%

    ಹೊಳೆಮಕ್ಕಳು

    0

    ಇದು ಬಿದರಹಳ್ಳಿ ನರಸಿಂಹ ಮೂರ್ತಿಯವರ ಕಾದಂಬರಿ.

    Original price was: $2.40.Current price is: $2.16.
    Add to cart
  • -10%

    ತಂತ್ರಯೋನಿ

    0

    ತಂತ್ರಯೋನಿ :

    ‘ತಂತ್ರಯೋನಿ’  ಗ್ರಂಥ  ತಂತ್ರದ  ಶಾಸ್ತ್ರವನ್ನು  ಕುರಿತು  ವಿವರವಾಗಿ  ಹೇಳುತ್ತದೆ.  ತಂತ್ರ  ಒಂದು  ರಹಸ್ಯವಿದ್ಯೆ.  ಈ  ವಿದ್ಯೆಯನ್ನು  ಗುರುವಿನಿಂದ  ಪಡೆಯಲು  ಶಿಷ್ಯ  ಅಧಿಕಾರಿಯಾಗಿರಬೇಕು.  ‘ಅಶಿಷ್ಯಾಯ  ನ  ದೇಯಂ’  ಎನ್ನುವದು  ಇಂಥ  ವಿದ್ಯೆಗಳಿಗೆ  ಒಂದು  ನಿಷೇಧವಾಕ್ಯ. ದೀಕ್ಷೆ,  ಧ್ಯಾನ,  ಜಪ,  ಮಂತ್ರ  ಮೊದಲಾದವುಗಳು  ಕೂಡ  ತಂತ್ರವಿದ್ಯೆಯ  ಅಂಗಗಳಾಗಿರುವುದರಿಂದ  ಅವುಗಳನ್ನು  ಕುರಿತು  ಸಾಕಷ್ಟು  ವಿವರಗಳನ್ನು  ಈ  ಗ್ರಂಥದಲ್ಲಿ  ನೀಡಲಾಗಿದೆ.  

    Original price was: $4.50.Current price is: $4.06.
    Add to cart
  • -10%

    ಮುಖಾಂತರ

    0

    ಮುಖಾಂತರ

    ‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು  ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
    ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.

    Original price was: $6.60.Current price is: $5.94.
    Add to cart
  • -10%

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು

    0

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:

     “ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.

    Original price was: $0.84.Current price is: $0.76.
    Add to cart
  • -10%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ

    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $2.70.
    Add to cart
  • -10%

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    0

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    ಆಚಾರ್ಯ ಪ್ರಹಸನ  ಮತ್ತು ಏನ್ ಹುಚ್ಚುರೀ ಇವು ಎರಡು  ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ  ಪ್ರಹಸನ’ವು  ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿನ್ದಲೂ ಪ್ರಭಾವಿತವಾಗಿವೆ.  ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೀರಾ ಬಲ್ಲ ಕೃತಿಗಳಿವು.

    Original price was: $1.44.Current price is: $1.30.
    Add to cart
  • -10%

    ತೇರು….

    0

    ತೇರು ಕಾದಂಬರಿಯನ್ನು ಓದಲಾರಂಭಿಸಿದಾಗ ಒಂದನೇ ಭಾಗದಲ್ಲಿ ಪತ್ರಕರ್ತ ಪಾಟೀಲರಿಗೆ ಧರಮನಟ್ಟಿ ಸ್ವಾಂವಪ್ಪಜ್ಜ, ಧರಮನಟ್ಟಿಯ ದೇಸಗತೀ ಕಥೀ ಹೇಳಲಾರಂಭಿಸಿದ. ಅದರ ಜೊತಿಗೆ ನಾಳೆ ನಮ್ಮೂರಾಗ ವಿಠ್ಠಲ ದೇವರ ತೇರ ಇದೆ ನೀವು ಬರಲೇ ಬೇಕು ಎಂದು ಹಠ ಹಿಡಿದು ಕರದುಕೊಂಡು ಹೋದ. ಅಂದು ರಾತ್ರಿ ಅಲ್ಲಿ ಗೊಂದಲಿಗ್ಯಾರು ಕಥಿ ಹೇಳತಾರ ಕೇಳುಣ ನಡಿರಿ ಎಂದು ಪಾಟೀಲರನ್ನು ಕರೆದುಕೊಂಡು ಹೋದ. ವಿಠಲ ದೇವರ ತೇರಿನ ವರ್ಣನೆಯನ್ನ ಆರಂಭಿಸಿ ತೊಗಲು ಬೊಂಗೆ ಆಡಿಸೋ ದ್ಯಾಮಣ್ಣನ‌ ಮಗನ ಮರಣದವರೆಗೂ ಗೊಂದಲಿಗ್ಯಾರ ಪದದ ಧಾಟಿಯಲ್ಲೇ ಸಂಪೂರ್ಣ ಕಥೆ ಹೇಳಿದ್ದು ಕಾದಂಬರಿಗೆ ಬಹು ವಿಶೇಷ ಮೆರಗನ್ನು ಕೊಟ್ಟಿದೆ.

    ಕಾದಂಬರಿಯಲ್ಲಿ ತೇರು ತಯಾರಿಸಿದ ನಂತರ ಮೊದಲ ತೇರು ಏಳೆಯಲು ಜನರು ಸೇರಿದಾಗ ಒಂಚೂರ ನೆಲಬಿಟ್ಟು ಕದಲೋದಿಲ್ಲ. ಅದಕ್ಕೆ ಪುರೋಹಿತರನ್ನ ವಿಚಾರಿಸಲಾಗಿ ಅದಕ್ಕೆ ಕೆಳಜಾತಿಯ ಮನುಜನ ಬಲಿ ಬೇಕು ಎಂದು ಕೇಳುತ್ತಿದೆ ತೇರು ಎಂದ ಹೇಳುತ್ತಾನೆ ಪುರೋಹಿತ. ಊರಲ್ಲಿ ಸುದ್ಧಿ ಹರಡಿ ಬೆಳಗಾಗುದರೊಳಗ ಎಲ್ಲ ಕೀಳುಕುಲದ ಜನಾಂಗ ಊರು ಬಿಟ್ಟು ಹೊರಟೋಗಿದ್ದರು. ಒಬ್ಬನೇ ಒಬ್ಬನು ಗೊಂಬೀರಾಮರಾ ದ್ಯಾವಯ್ಯ ದೇವಾಲಯದ ಆವರಣದಲ್ಲಿ ಸಿಕ್ಕನು. ಡಂಣಾಯಕ ಹಾಗು ಅವನ ಹೆಂಡತಿ ಸೇರಿ ದ್ಯಾವಯ್ಯನಿಗೆ ೮ ಎಕರೆ ಜಮೀನು ನೀಡುವುದಾಗಿ ಆಸೆ ಚೆಲ್ಲಿ ಒಬ್ಬ ಮಗನನ್ನ ತೇರಿಗೆ ಬಲಿಕೊಡಲು ತಯಾರಿ ಮಾಡಿದರು‌. ದ್ಯಾವಯ್ಯನ ಹೆಂಡತಿ ಪಾರೋತೆವ್ವ ಗೋಳಾಡಿ ಅಳಲು ಪ್ರಾರಂಭಿಸುತ್ತಾಳೆ. ಗಂಡ ಅವಳನ್ನು ಬಡಿದು ಹೊಡೆದು ದೇವರಿಗೆ ಮಗನನ್ನ ಅರ್ಪಿಸೋಣ ಎಂದು ಹೇಳಿದನು. ಹಣದ ಆಸೆಗೋ ಏನೋ ಅಂದು ಮಡದಿಯ ಮಾತಿಗೆ ಬೆಲೆ ಕೊಡದೇ ಬಡಿದು ತೇರಿಗೆ ಮಗನನ್ನ ಅರ್ಪಿಸಿದರು. ಅಂದಿನಿಂದ ಇಂದಿನವರೆಗೂ ದ್ಯಾವಪ್ಪನ ಮನೆತನದವರೇ ಬಂದು ರಕ್ತತಿಲಕ ಅಂದ್ರೆ ಹಣೆಯನ್ನು ತೇರಿನ ಗಾಲಿಗೆ ಗುದ್ದಿ ರಕ್ತಾ ಬಂದ ನಂತರ ಆ ರಕ್ತವನ್ನು ದೇವರಿಗೆ ಹಚ್ಚಿದಾಗ ತೇರು ಮುಂದೆ ಬರ್ತಿತ್ತು ಎಂಬ ವಾಡಿಕೆ ಮುಂದುವರೆದಿತ್ತು.

    Original price was: $2.04.Current price is: $1.84.
    Add to cart
  • -10%

    ಜಯ

    0

    ಮಹಾಭಾರತದ ಬೃಹತ್ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಈ ಕಥನ ತನ್ನ ಅಚ್ಚುಕಟ್ಟಾದ ನಿರೂಪಣೆ, ಚಕಮಕಿಯಂತೆ ಮಿಂಚುವ ಚುರುಕಾದ ಸಂಭಾಷಣೆಗಳಿಂದ ಆಕರ್ಷಕವಾಗಿ, ಸವೇಗವಾಗಿ ಕಥೆಯನ್ನು ನಡೆಸಿಕೊಂಡು ಹೋಗುತ್ತದೆ. ಕಥೆಗಳನ್ನು ಸಂಗ್ರಹಿಸಿ ಹೇಳಿದ್ದರೂ, ಅವುಗಳ ನಾಟ್ಯಾಯಮಾನತೆ ಎದ್ದುಕಾಣುತ್ತದೆ. ಇದೆಲ್ಲ ಪಟ್ಟನಾಯಕರು ಸಿದ್ಧಹಸ್ತ ಕತೆಗಾರರು ಎಂಬುದಕ್ಕೆ ಸಾಕ್ಷಿಯಾಗಿದೆ.

    Original price was: $7.81.Current price is: $7.02.
    Add to cart
  • -10%

    ಕೈಗೆ ಬಂದ ತುತ್ತು

    0

    ಕೈಗೆ ಬಂದ ತುತ್ತು 

    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: $3.00.Current price is: $2.70.
    Add to cart
  • -10%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $6.48.
    Add to cart
  • -10%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: $2.40.Current price is: $2.16.
    Add to cart