Availability: In Stock

ಏಕ ಅನೇಕ

Original price was: $7.81.Current price is: $4.68.

Description

ಪ್ರಬಂಧವೆನ್ನುವುದು ಕವಿತೆಯಲ್ಲ, ಕತೆಯಲ್ಲ. ಆದರೂ ಅದು ಆಗಾಗ ಈ ಎರಡೂ ಪ್ರಕಾರಗಳಿಂದ ತನಗೆ ಬೇಕಾದುದನ್ನು ಸ್ವೀಕರಿಸುತ್ತದೆ. ಪ್ರಬಂಧಕ್ಕೆ ಸಿದ್ಧ ಸಂರಚನಾ ಸೂತ್ರವೇನೂ ಇಲ್ಲ. ಆದರೆ ಅತ್ಯುತ್ತಮ ಪ್ರಬಂಧಗಳನ್ನು ತುಂಬ ಸೂಕ್ಷ್ಮವಾಗಿ ಓದಿದಾಗ ಅವುಗಳಲ್ಲಿ ಸಾಕಷ್ಟು ಸುವ್ಯವಸ್ಥೆಯೂ ಸುಸಾಂಗತ್ಯವೂ ಪ್ರಮಾಣಬದ್ಧತೆಯೂ ಇರುವುದನ್ನು ಅರಿಯಬಹುದು. ಅಂಥವು ಸಾಕಷ್ಟು ಪ್ರಮಾಣದಲ್ಲಿ ಈ ಸಂಕಲನದಲ್ಲೇ ಇವೆ. ಅವು ವೈಯಕ್ತಿಕ ನೆಲೆಯಲ್ಲಿರಲಿ, ವಾದ ಹೂಡುವಂತಿರಲಿ, ಉಪದೇಶಾತ್ಮಕವಾಗಿರಲಿ ಅಥವಾ ತಮಾಷೆಯ ಧಾಟಿಯಲ್ಲಿರಲಿ, ಅವು ಸದ್ಯದ ತುರ್ತಿನಿಂದ, ಬಹುಶ್ರುತತ್ವದಿಂದ ಮತ್ತು ಸೂಕ್ಷ್ಮ ಒಳನೋಟಗಳಿಂದ, ಎಲ್ಲಕ್ಕಿಂತ ಮಿಗಿಲಾಗಿ ವಿನೋದವಿಲಾಸದಿಂದ ತಮ್ಮ ಕಾಲಧರ್ಮವನ್ನು ಸೆರೆಹಿಡಿದು ಅದಕ್ಕೊಂದು ಭೂತಗನ್ನಡಿ ಹಿಡಿಯುತ್ತವೆ.
ಇಲ್ಲಿನ ಪ್ರಬಂಧಗಳಲ್ಲಿ ಒಂದು ಅತ್ಯುತ್ತಮ ಪ್ರಬಂಧದಲ್ಲಿ ಏನೆಲ್ಲ ಇರಬಹುದೋ ಅದೆಲ್ಲವೂ ಇದೆ.
ಇಲ್ಲಿನ ಕೆಲವು ಪ್ರಬಂಧಗಳು ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಪದವಿ ತರಗತಿಗಳಿಗೆ ಪಠ್ಯಗಳಾಗಿವೆ, ಕೆಲವು ಮಯೂರ, ಚಿಂತನಶೀಲ ಸಮಾಜಮುಖಿ, ಅಕ್ಷರ ಸಂಗಾತ, ಕರಾವಳಿ ಮುಂಜಾವು ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅನೇಕ ಓದುಗರಿಂದ ಮೆಚ್ಚುಗೆ ಪಡೆದುಕೊಂಡಿವೆ. ಇದರಲ್ಲಿ ಹೆಚ್ಚಿನವು ಲಲಿತ ಪ್ರಬಂಧಗಳು. ಕೆಲವು ಪ್ರಬಂಧಗಳೂ ಇವೆ. ಲಲಿತ ಪ್ರಬಂಧದ ಸಡಿಲ ಬೀಸಿನಲ್ಲಿ ನನ್ನ ಚದುರಿದ ಚಿಂತನೆಗಳು ಏಕ ಅನೇಕವಾಗಿ ಇಲ್ಲಿನ ಪ್ರಬಂಧಗಳಲ್ಲಿ ಮೈದಳೆದು ನಿಂತಿವೆ.

Additional information

Category

Author

Publisher

Language

Kannada

Book Format

Ebook

Pages

458

Year Published

2024

ISBN

9789392192227

Reviews

There are no reviews yet.

Only logged in customers who have purchased this product may leave a review.