ಆಧುನಿಕ ಮದುವೆ ಮನೆ

ಆಧುನಿಕ ಮದುವೆ ಮನೆ

ಪೀಠಿಕೆ: ಅನಾದಿ ಕಾಲದಿಂದಲೂ ಸಂಪ್ರದಾಯ ಪದ್ಧತಿ ನಮ್ಮ ಧರ್ಮವನ್ನು ಆಚಾರ-ವಿಚಾರಗಳನ್ನು ನಾವು ನಮ್ಮ ವೈವಿಧ್ಯಮಯವಾದ ಆಚರಣೆಗಳಲ್ಲಿ ತೋರಿಸುತ್ತೇವೆ.

ಅಲ್ಲದೇ ಕರ್ಮಾಚರಣೆಗಳಾದಂತ ಪ್ರಥಮ ಕೇಶಕಂಡನ, ಉಪನಯನ, ವಿವಾಹ, ನಾಮಕರಣ ಇತ್ಯಾದಿ.

ಹಿಂದಿ ಕಾಲದಲ್ಲಿ ಕರ್ಮಾಚರಣೆಗಳಲ್ಲಿ ಪ್ರಮುಖವಾಗಿದ್ದೆ ‘ವಿವಾಹ’. ಈ ವಿವಾಹವು ಪೂರ್ವ ದೈವ ನಿಶ್ಚಿತ ಹಾಗೂ ಪವಿತ್ರ ಕಾರ್ಯವೆಂದೆನಿಸುತ್ತದೆ. ಎರಡು ದೇಹ ಅಷ್ಟೇ ಅಲ್ಲದೇ ಎರಡು ಆತ್ಮಗಳ ಸಂಬಂಧದ ಹೊಸ ಬೆಸುಗೆಗೆ ಮದುವೆ ಎನ್ನುವರು.

ಒಂದು ಹೆಣ್ಣು ತನ್ನ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಿ ಅದೇ ತನ್ನ ಮನೆಯೆಂದು ತಿಳಿದು ತನ್ನ ಹೊಸ ಜೀವನವನ್ನು ಅಲ್ಲಿ ಎಲ್ಲವೂ ತನ್ನದೇ ಆದ ಜವಾಬ್ದಾರಿಯನ್ನು ನಿಭಾಯಿಸುತ್ತ ಅತ್ತೆ ಮಾವಂದಿರೇ ತಂದೆ-ತಾಯಿಯೆಂದು ತಿಳಿದು ಬದುಕುತ್ತಾಳೆ.

ಹಿಂದಿನ ಕಾಲದಲ್ಲಿ ಮದುವೆ ಮನೆ ಎಂದರೆ ಸಂಭ್ರಮ ಸಡಗರ ಅಷ್ಟೇ ಅಲ್ಲದೇ ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು.

ಭಾರತದೆಲ್ಲೆಡೆ ಎಲ್ಲ ಜಾತಿಯರೂ ವೈಶಿಷ್ಟ್ಯ ರೂಪದಿಂದ ತಮ್ಮ-ತಮ್ಮ ರೀತಿಯಲ್ಲಿ ವಿವಾಹವನ್ನು ಆಚರಿಸುತ್ತಾರೆ. ಗಂಡು-ಹೆಣ್ಣು ಮದುವೆ ವಯಸ್ಸಿಗೆ ಬಂದಾಗ ಗಂಡು-ಹೆಣ್ಣಿನ ಮನೆಯವರು ಒಬ್ಬರೊನ್ನಬ್ಬರು ನೋಡಲು ಬಿಡುತ್ತಿರಲಿಲ್ಲ. ಪರಸ್ಪರ ತಂದೆತಾಯಿಯಂದಿರು ಮಾತನಾಡಿಕೊಂಡು ಮದುವೆ ನಿಶ್ಚಯಿಸುತ್ತಿದ್ದರು. ಒಪ್ಪಿಗೆ ಬಂದ ನಂತರ ಗಂಡಿನವರು ಹೆಣ್ಣಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಿದ್ದರು. ಅವಳ ಧ್ವನಿ ಪರೀಕ್ಷೆ ನಡೆಸುತ್ತಿದ್ದರು. ಹಾಡು ಹಾಡಿಸುವುದರ ಮೂಲಕ, ಅವಳಲ್ಲಿ ಯಾವ ನ್ಯೂನ್ಯತೆ, ದೇಹಿ ವಿಕಲಾಂಗ ಪರೀಕ್ಷಿಸಲು ಅವಳನ್ನು ನಡೆಸಿ ನೋಡುತ್ತಿದ್ದರು. ಎಲ್ಲ ರೀತಿಯಲ್ಲಿ ಅವಳನ್ನು ಪರೀಕ್ಷೆಗೈದು ನಂತರ ಅವಳು ಎಲ್ಲದರಲ್ಲಿಯೂ ಸರಿಯಿದ್ದಲ್ಲಿ ಮನೆ ಪಂಡಿತರ ಕಡೆ ಅವಳ ಜೋತಿಷ್ಯ, (ಕುಂಡಲಿ) ತೋರಿಸುತ್ತಿದ್ದರು. ಅವರವರ ನಾಡಿ, ನಕ್ಷತ್ರ, ರಾಶಿ, ಗ್ರಹಗಳ ಚಲನೆಗಳನ್ನು ಲೆಕ್ಕಪಡಿಸಿ ಅವೂ ಸರಿಯಾಗಿ ಕೂಡಿ ಬಂದಲ್ಲಿ ವಿವಾಹ ನಿಶ್ಚಯಿಸುತ್ತಿದ್ದರು. ಒಂದು ವೇಳೆ ನಾಡಿ ಇಬ್ಬರದೂ ಒಂದೇ ಇದ್ದರು ಮದುವೆ ಮಾಡುತ್ತಿರಲಿಲ್ಲ. ಆಗಿನ ಸಂಪ್ರದಾಯಕ್ಕೆ ತಕ್ಕಂತೆ ವಧು-ವರರು ಒಪ್ಪುತ್ತಿದ್ದರು.

ಹಾಗೆಯೇ ಗುರು ಹಿರಿಯರು ಹೇಳಿದಂತೆ ನಡೆಯುತ್ತಿದ್ದರು. ಹೀಗೆಯೇ ಕಾಲ ಉರುಳಿದಂತೆ ಕಾಲದ ಜೊತೆ ಸಂಪ್ರದಾಯವೂ ಬದಲಾಗುತ್ತಾ ಕುಂದುತ್ತಾ ಬರಹತ್ತಿತ್ತು. ನೋಡ ನೋಡುವಷ್ಟರಲ್ಲಿ ಹಿರಿಯರು “ಆಟಕ್ಕುಂಟು ಲೆಕ್ಕಕ್ಕಿಲ್ಲ” ಅನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ.

ಈಗಿನ ಕಾಲದ ವಧುವನ್ನು ನೋಡುವುದಾದರೆ ಅವರು “ಪ್ರ್ಯಾಕ್ಟಿಕಲ್” ಎಂಬ ಶಬ್ಧವನ್ನು ಹೆಚ್ಚಾಗಿ ಬಳಸ್ತಾರೆ.

ಮದುವೆ ಎನ್ನೊ ಪವಿತ್ರ ಬಂಧನವನ್ನು ಚಿಕ್ಕಮಕ್ಕಳಂತೆ ಬಲು ಚೆಂದ ಆಡ್ತಾರೆ. ಮೊದ್ಲು ಹಿರಿಯರು ಹೇಳಿದಂತೆ ಅವರು ತೋರಿಸಿದವರನ್ನು ಮದುವೆ ಆಗ್ತಿದ್ರು. ಆದ್ರೆ ಈಗ ಮದುವೆ ಮಾಡ್ಕೊಂಡ ಮೇಲೆ ಹಿರಿಯರ ನೆನಪು ಜಾತಿ- ಭೇದ ಭಾವ ಮರ್ತೆಬಿಡ್ತಾರೆ. ಮೊದಲು ತಾವೆ ತಮ್ಮ ಬಾಳ ಸಂಗಾತಿಯನ್ನು ಹುಡುಕಿಕೊಂಡು ತಮ್ಮಷ್ಟಕ್ಕೆ ತಾವೇ ಮದುವೇ ನಿಶ್ಚಯಿಸಿಕೊಳ್ಳುತ್ತಾರೆ. ಮಕ್ಕಳು ತಮ್ಮ ತಂದೆ-ತಾಯಿಯಂದಿರ ಇಚ್ಛೆಯೆನೆಂದೂ ಕೇಳದೇ, ತಮ್ಮ ನಿರ್ಣಯವನ್ನು ಹೇಳಿದರೇ ಅವರೇನು ಮಾಡಿಯಾರು? ಮಕ್ಕಳು ಬಿಟ್ಟು ಎಲ್ಲಿ ಹೋತಾರೊ ವೃದ್ಧಾಶ್ರಮದ ಗತಿ ಬೇಡವೆಂದು ಮದುವೆಗೆ ಒಪ್ಪಲೇಬೇಕಲ್ವಾ?

ಇಲ್ಲಿಂದ ಶುರುವಾಗುತ್ತೆ ನೋಡ್ರಿ ಆಟ…. ತಂದೆ-ತಾಯಿ ಮದುವೆಗೆ ಒಪ್ಪಿದ್ದೇ ತಡ ಮದುವೆ ದಿನಾಂಕ ನಿಶ್ಚಯಿಸಿ ಅದೂ ರವಿವಾರನೇ ಬರೋತರಾ ಮತ್ತೆ ಸಂಬಂಧಿಕರು ಬರ್ಲಿ ಕ್ಲೋಸ್ ಫ್ರೆಂಡ್ಸ್ ಮಾತ್ರ ಬರ್ಲೇಬೇಕು.

ಮದುವೆಯ Invitation watsapp ನಲ್ಲಿ ಎಲ್ರಿಗೂ ಕಳಿಸಿ. ಮದುವೆಗೆ Invite ಮಾಡ್ತಾರೆ. Online ನಲ್ಲಿ ಕಲ್ಯಾಣಮಂಟಪ Booking ಮಾಡ್ತಾರೆ. ಆ ಮದುವೆ ಮಾಡೋ ಪುರೋಹಿತರನ್ನು ಮೊದ್ಲು ಕರಿತಾರೋ ಇಲ್ವೊ ಗೊತ್ತಿಲ್ಲ ‘Proffessional Photographer’ಮಾತ್ರ ಮೊದ್ಲು ಮಾಡಿ ಕರದಿರ್ತಾರೆ. ಇಲ್ಲಿಂದ ಪ್ರಾರಂಭ ಆಗುತ್ತೆ ನೋಡಿ Photoshoot Prewedding Photoshoot till Reseptionವರೆಗೂ ಫೋಟೊಗೆ ಮೊದ್ಲೆ ಮಹತ್ವಕಣ್ರಿ.

ವಧು-ವರರು ಯಾವ Pose ನೂ ಉಳ್ಸಿರಲ್ಲ ಅಷ್ಟು ಫೊಟೊ ತಗಸ್ಕೊಂಡಿರ್ತಾರೆ. ಅವರದ್ದೇ ಬೇರೆ ಲೋಕ ಸೃಷ್ಟಿಸಿಕೊಂಡಿರ್ತಾರೆ. ತಮ್ಮ Friends Circle ಜೊತೆ Partyಮಾಡ್ತಾರೆ.

ಸಂಬಂಧಿಕರೂ ಇಲ್ಲಿ ಬಂದಿದಾರೆ ಅಂತ ತಂದೆ-ತಾಯಿಗಳು ಮತ್ತೆ ಮತ್ತೆ ನೆನಪಿಸ್ತಿರಬೇಕು. ನಾನು ನೋಡಿದ ಪ್ರಕಾರ ಒಂದಿಷ್ಟು ಮದ್ವೇಲಿ ತಂದೆ-ತಾಯಿನೂ Guest ಥರಾ ಇರ್ತಾರೆ. ಈಗ ಸಂಬಂಧಗಳಿಗೆ ಮಹತ್ವನೆ ಉಳ್ದಿಲ್ಲ. ಮದ್ವೆ ಮನೆ ಕಡಿಮೆ ‘ಪಾರ್ಟಿಹಾಲ್’ ಧರಾನೆ ಜಾಸ್ತಿ ಇರುತ್ತೆ. ವಧು-ವರರು ಎಷ್ಟರ ಮಟ್ಟಿಗೆ Busy ಆಗಿರ್ತಾರೆ ಅಂದ್ರೆ ಯಾರಾದ್ರು ಬಂದು ಮದ್ವೆಗೆ wish ಮಾಡಿದ್ರೆ ಇವರಾರಪ್ಪ ಎಲ್ಲೋ ನೋಡಿದಿನೆ. ನೆನ್ಪೆ ಆಗ್ತಿಲ್ಲಾ ಅಂತಾ fake smileಕೊಡ್ತಾ ನಿಂತಿರ್ತಾರೆ. ಎಲ್ಲವೂ ಪದ್ಧತಿ ಪ್ರಕಾರಕ್ಕಿಂತ Enjoyment ಹುಡುಕ್ತಾರೆ. ಈಗಿನವರು ಎಲ್ಲವನ್ನು ಪಾಶ್ಚಾತ್ಯ ಸಂಸ್ಕøತಿಯನ್ನು ಅಳವಡಿಸಿಕೊಂಡಿರ್ತಾರೆ. ಹಾಗೋ ಹೀಗೋ ಎರಡು ದಿನ ಕಳಿತಾರೆ. ನಂತರ honeymoon ಅಂತ trip ಮಾಡಿ ಬಂದಿರ್ತಾರೆ. ಇನ್ನೂ ಮನೆಗೆ ಬಂದಿರ್ತಾರೊ ಇಲ್ವೋ ಮತ್ತೆ Morning ಇಂದ Daily routin start morning ಬೇಗ ಏಳಬೇಕು office ಹೊಗ್ಬೇಕು ಒಂದೇ ಮನೇಲಿ ಅತ್ತೆ ಮಾವನ ಜೋತೆ ಇರಕಾಗಲ್ಲ ಮನೆ ಮಾಡ್ತಾರೆ. ಸಂಬಂಧಗಳ ಬೇಲೆನೆ ಇಗಿನ್ವಕ್ಕೆ ಗೊತ್ತಿರಲ್ಲ.

ಇಗಿನ್ ಕಾಲದಲ್ಲಿ ದೂರ್ಬಿನ್ ಹಿಡ್ದು ಹುಡುಕಿದ್ರೂ ಅಲ್ಲೋ ಇಲ್ಲೋ ಒಂದ ಮನೆ. ಯಾರು ಜೊತೆಗಿದ್ದು ಸಂಬಂಧಗಳನ್ನು ಉಳಿಸಿಕೊಂಡು ಹೊಗೊಕೆ ಬಯಸಲ್ಲ. ಜಗಳಾನೆ ಬೇಡ ಅಂತಾರೆ ಮಾತೆತ್ತಿದ್ರೆ

ಒಂದೇ ಮನೇಲಿ ಇದ್ರೂ ಅಷ್ಟೆ ಮನೆ ತುಂಬಾ ಕೆಲ್ಸದವರನ್ನು ಇಟ್ಕೊಂಡಿರ್ತಾರೆ. ಬಟ್ಟೆಗೆ, ಬಾಂಡಿಗೆ, (ಪಾತ್ರೆ), ಅಡುಗೆ ಎಲ್ಲಾ robot ಯುಗರೀ ಕೇಳಿರಾ? ಎಲ್ರೋ ದುಡ್ಡಿನ ದಾಸರು, ಮಾತೆತ್ತಿದ್ರೆ ದುಡ್ಡು. ಸಂಬಂಧಿಕರನ್ನು ಬಿಡಿ ಗಂಡ ಹೆಂಡತಿ ಮನೆಲಿದ್ರೂ ಇಲ್ಲವರ ಥರಾ ಇರ್ತಾರೆ. ಗಂಡು Laptop ಹೆಂಡ್ತಿ mobile ಮತ್ತೆ ಹೇಗೆ time ಸಿಗುತ್ತೆ ಹೇಳಿ ಪಾಪ!..

ಮುಂಜಾನೆ ಹೊದ್ರೆ ರಾತ್ರನೆ ಮನೆ ಕಾಣ್ತಾರೆ. ಹಸಿವೆ ಆದ್ರೆ ಮೊದ್ಲೆಲ್ಲಾ ಅಮ್ಮಾ ನೆನ್ಪಾಗ್ತಿದ್ಲು ಇಗೆಲ್ಲ ಹಸಿವೆ ಆದತಕ್ಷಣ zomato , swiggy, ಇದೆಯಲ್ಲ office ಹೊಗ್ರೋವು ಎಷ್ಟು ತಮ್ಮ ಕೆಲಸದಲ್ಲಿ ತಲ್ಲಿನರಾಗಿರ್ತಾರೆ. ಅಂದ್ರೆ ಅವರಿಗೆ ತಾವು Dipression ಹೋಗಿದಿವಿ ಅಂತಾನು ಗೊತ್ತಾಗ್ತಿರಲ್ಲ.

ಮೊದ್ಲು ಕೆಲ್ಸಕ್ಕೆ ಮಹತ್ವ ಆಮೇಲೆ ಎಲ್ಲಾ ‘Family’ ಜೊತೆ 5 ನಿಮಿಷಾನು timespend ಮಾಡೊಕೆ ಆಗಲ್ಲ. ಇವ್ರೆಲ್ಲಾ ಬೇರೆ ಏದಕ್ಕಾದ್ರೂ ಹೆದರ್ತಾರೊ ಇಲೊ ಗೊತ್ತಿಲ್ಲ Monday morning ಅಂದ್ರೆ ಎದೆ ಬಡಿತಾ ಜೋರಾಗಿರುತ್ತೆ. ಇದು ನಗೋ ವಿಷಯ ಅಂತಾ ಸುಮ್ನೆ ಬಿಡಕೊ ಆಗಲ್ಲ. ವಿಜ್ಞಾನಿಗಳ ಪ್ರಕಾರ Monday morning ಅಂದ್ರೆ ನಿಜ್ವಾಗ್ಲೂ ಭಯಂಕರ effect ಕೊಡುತ್ತಂತೆ. ಸ್ವಲ್ಪ ಈ stressful life ನಿಂದ ಹೊರಗಡೆ ಬಂದು Family ಜೊತೆ time spend ಮಾಡಿ Atleast weekend ನಲ್ಲಾರ್ರೂ ಅಪ್ಪ ಅಮ್ಮನ್ನ ಭೇಟಿ ಮಾಡಕ್ಹೋಗಿ ಹತ್ತಿರದವರಿಗೆ ಸ್ವಲ್ಪ ಸಮಯ ಕೊಡಿ. ಎಲ್ಲವೂ ಕ್ಷಣಿಕ. ಈ ಸಂಬಂಧಗಳಿಗೆ ಮಹತ್ವ ಕೊಡಿ.

 

 

 

Leave a Reply