ಕೋಲೆ ಬಸವ…!
ಆಧುನಿಕತೆಯ ಭರಾಟೆಯಿಂದಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜಾನಪದ ಆಟಗಳು ಹಾಗೂ ಕಲೆಗಳಲ್ಲಿ ಕೋಲೆ ಬಸವನ ಆಟ ಒಂದು. ಕೋಲೆ ಬಸವ ನೋಡಲು ಬಹಳ ಸುಂದರ. ಅವುಗಳ ಭುಜಗಳನ್ನು ಎತ್ತರವಾಗಿ ಕಾಣುವಂತೆ ಬಣ್ಣ ಬಣ್ಣದ ಜೂಲುಗಳಿಂದ ಅಲಂಕಾರ ಮಾಡಿ, ಕೋಡಿನ ತುದಿಗೆ ಬಣ್ಣದ ರಿಬ್ಬನ್ ಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಕಾಲುಗಳಿಗೆ ಗಗ್ಗರ, ಹಣೆಗೆ ದೇವರ ಪಟದೊಂದಿಗೆ ಕವಡೆ ಸರದ ಅಲಂಕಾರ. ಈ ರೀತಿ ಶೃಂಗಾರಗೊಂಡ ಗೋವುಗಳು ತಮ್ಮ ಯಜಮಾನನ ಅಣತಿಯಂತೆ ವಿವಿಧ ಆಟಗಳನ್ನು ಪ್ರದರ್ಶಿಸುತ್ತಾ ನೆರೆದ ಜನರಿಗೆ ಮನರಂಜನೆ ಒದಗಿಸುತ್ತಿದ್ದವು. ಸಾಂಪ್ರದಾಯಿಕ ವಾದ್ಯಗಳ ಸಂಗೀತ ಆಟಕ್ಕೆ ಇನ್ನಷ್ಟು ರಂಗೇರಿಸುತ್ತಿತ್ತು.ಹಿಂದೆ ಈ ಕೋಲೆ ಬಸವನನ್ನು ಜನ ದೈವ ಸ್ವರೂಪಿಯಾಗಿ ಕಾಣುತ್ತಿದ್ದರು. ಆಧುನಿಕ ಮನರಂಜನೆಯ ನಡುವೆ ಪ್ರೋತ್ಸಾಹವಿಲ್ಲದೇ ಈ ಸಂಪ್ರದಾಯ ನಶಿಸುತ್ತಿದೆ. ಜೊತೆಗೆ ಇದು ಹಿಂದಿನಂತೆ ಮನರಂಜನೆಯ ಒಂದು ಸಾಧನವಾಗದೇ, ಭಿಕ್ಷಾಟನೆಯ ಮತ್ತೊಂದು ರೂಪಕ್ಕೆ ಬದಲಾದದ್ದು ಮಾತ್ರ ನಿಜಕ್ಕೂ ವಿಪರ್ಯಾಸದ ಸಂಗತಿ.
ಹೊಸ್ಮನೆ ಮುತ್ತು