ಕೂರ್ಮಾಸನ
ಮಣೆಗಳ ಮೇಲೆ ಕೂರುವ ಅಭ್ಯಾಸವೇ ಕಡಿಮೆಯಾಗಿರುವಾಗ ಮುಖ ನೋಡಿ ಮಣೆ ಹಾಕುವ ಗಾದೆಯೂ ನೇಪಥ್ಯಕ್ಕೆ ಸರಿಯುತ್ತಿದೆ. ಇಷ್ಟಕ್ಕೂ ಮಣೆ ಕೂರುವ ಆಸನ ಮಾತ್ರವಲ್ಲ, ಅದು ನಮ್ಮ ಸಾಮಾಜಿಕ ಸ್ಥಾನಮಾನಗಳನ್ನೂ ತೋರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಮದುಮಕ್ಕಳು ಕೂರುವ ಮಣೆ ಗಾತ್ರದಲ್ಲಿ ಡಬಲ್ ಆಗಿರುತ್ತಿತ್ತು. ಹುಲಿಚರ್ಮದ ಹಾಸು ತ್ಯಾಗ ಮತ್ತು ವಿರಕ್ತಭಾವವನ್ನು ಸೂಚಿಸುತ್ತಿತ್ತು. ಹಾಗೆಯೇ ಆಮೆಯ ಆಸನವೂ ಒಂದಿದೆ. ಇದು ಸಂಸಾರದಲ್ಲಿದ್ದೂ, ಮನದಲ್ಲಿ ವಿಷ್ಣುವಿನ ಜಪವನ್ನು ಮಾಡುವ ಮನಃಸ್ಥಿತಿಯನ್ನು ಹಿಡಿದಿಡುವ ಆಸನವಿದು. ಅದಕ್ಕೇನೇ ಇದನ್ನು ಲೋಹದಲ್ಲಿ ತಯಾರಿಸಿಲ್ಲ. ಏಕಮರದಲ್ಲಿ ಇದನ್ನು ಕೆತ್ತಲಾಗಿದೆ. ಯಾವುದನ್ನೂ ಜೋಡಿಸಿಲ್ಲ. ಕೂರ್ಮಾವತಾರವನ್ನೂ (ದಶಾವತಾರದಲ್ಲಿ ವಿಷ್ಣುವಿನ ಎರಡನೇ ಅವತಾರ) ಕೂರ್ಮಾಸನವನ್ನೂ (ಯೋಗಾಸನದ ಒಂದು ಭಂಗಿ) ಈ ಮಣೆಯೊಂದಿಗೆ ತಳುಕು ಹಾಕಬಹುದು. ಆದರೆ ಆಮೆತಂತೆಯೇ ಸ್ಥಿರವಾಗಿ, ನಿಧಾನವಾಗಿ ಆಧ್ಯಾತ್ಮಿಕ ಹಂತಗಳನ್ನು ಕಂಡುಕೊಳ್ಳಲು ಕೂರುವ ಆಸನ ಇದಾಗಿತ್ತು. ಆಮೆಯಂತೆಯೇ ದೀರ್ಘಾಯು ಆಗಿರುವ ಈ ಆಸನ ಶತಮಾನ ಕಂಡಿದೆ. ಆದರೆ ಆಮೆಯಂತೆಯೇ ಅಳಿವಿನಂಚಿನಲ್ಲಿದೆ ಎನ್ನುವುದಕ್ಕೂ ಕೂಡಾ ಅಷ್ಟೇ ಸತ್ಯ!!!
ಹೊಸ್ಮನೆ ಮುತ್ತು