ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗತ್ ಸಿಂಗ್. ಸ್ವಾತಂತ್ರ್ಯಕ್ಕಾಗಿ ಜೀವ ಮುಡಿಪಾಗಿಟ್ಟವನು; ಆದರೆ, ಅದಷ್ಟೇ ಅಂತಿಮ ಗುರಿಯೆಂದು ಭಾವಿಸದವನು. ಒಣ ಮರಗಳನ್ನು ಕಡಿಯುತ್ತಲೇ ಹೊಸ ಬೀಜಗಳ ಬಿತ್ತನೆಯ ಬಗ್ಗೆ ಆಲೋಚಿಸಿದವನು. ಉಗ್ರ ದೇಶಪ್ರೇಮಿ. ಎಂದರೆ, ಯಾವುದೋ ಭ್ರಾಮಕ ಭವ್ಯ ಸಾಮ್ರಾಜ್ಯದ ಪ್ರೇಮಿಯಲ್ಲ; ದೇಶವೆಂಬ ಮಾನವ ಸಮುದಾಯದ ಪ್ರೇಮಿ. ನಾವು ದಾರಿ ತಪ್ಪಿದರೂ ದಿಕ್ಕುತಪ್ಪದಂತೆ ತಡೆಯಬಲ್ಲ ಧ್ರುವತಾರೆ ಭಗತ್ ಸಿಂಗ್. ಅವನ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ||ಜಿ.ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ‘ಹೃದಯ’ ತುಂಬಿದ್ದಾರೆ. ನೈಜ ಮಾರ್ಕ್ಸ್ ವಾದಿ ಮನೋವೃತ್ತಿಯ ಎಲ್ಲಾ ಮುಖಗಳಾದ ಮಾನವಪ್ರೇಮ, ಸೈದ್ಧಾಂತಿಕ ಪ್ರಖರತೆ, ಅತ್ಯುನ್ನತ ನೈತಿಕ ಪ್ರಜ್ಞೆ, ತ್ಯಾಗ, ಧೈರ್ಯ-
ಇವೆಲ್ಲವುಗಳನ್ನೂ ಒಳಗೊಂಡಂತೆ ಇಲ್ಲಿ ಅವರು ಮೂಡಿಸಿರುವ ಭಗತ್ ಸಿಂಗ್ ನ ಚಿತ್ರಣ ನಮ್ಮೆಲ್ಲರ ಸ್ಫೂರ್ತಿಯ ಸೆಲೆಯಷ್ಟೇ ಅಲ್ಲ, ಅವನ ಹೆಸರನ್ನು ಬಂಡವಾಳವಾಗಿಸಿಕೊಳ್ಳಲು ಯತ್ನಿಸಿರುವ ಮತೀಯವಾದಿಗಳ ಕೃತಿಮ ಇತಿಹಾಸ ದರ್ಶನಕ್ಕೆ ಸವಾಲು ಸಹ ಆಗಿದೆ.
-10%
ಭಗತ್ ಸಿಂಗ್
Author: Ramkrishna.G
Original price was: $1.20.$1.08Current price is: $1.08.
ಭಗತ್ ಸಿಂಗ್ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ||ಜಿ.ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ‘ಹೃದಯ’ ತುಂಬಿದ್ದಾರೆ.
Summary
Information
Additional information
Category | |
---|---|
Author | |
Publisher | |
Pages | 160 |
Language | Kannada |
Year Published | 2021 |
Reviews
Only logged in customers who have purchased this product may leave a review.
Reviews
There are no reviews yet.