ದೇವರಿಗೊಂದು ಪತ್ರ (32)
ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ
ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ
ತಾಯಿ, ಕರುಳ ಕುಡಿಯ ದೂರ ಸರಿಸಿ ಮುನಿಸಿದ್ದು ಇದೆಯಾ?ಗೋವಿಂದ
ಗೋಮಾತೆ ಕರುವ ಹಸಿವ ಅರಿಯದೆ ಮೊಳೆಯುಣಿಸದ್ದು ಕಂಡೆಯಾ? ಶ್ಯಾಮ
ಪಕ್ಷಿ ತಾನು ಮರಿಗೆ ಗುಟುಕು ಕೊಡದೆ ಮೂನಿಸಿದ್ದು ಕಂಡೆಯಾ? ನಂದಾಗೋಪಾಲ
ಈ…ಭೂಲೋಕದಲ್ಲಿ ಕ್ಷುಲ್ಲಕ ಮನುಜಳು ಮಾತ್ರ ನಾನು…ಅಚ್ಯುತ
ನಿನ್ನಾಧಾರವಿರದೇ ಇನ್ನಾರು ಗತಿ ಎನ್ನ ಜೀವನ ನೌಕೆಗೆ.. ಓ ಪಾರ್ಥಸಾರಥಿ
ನೀ ನಡೆಸಿದಂತೆ ನಡೆವುದೊಂದೆ ಇಚ್ಛೆ ಎನಗೆ ಓ.. ಜನರ್ಧಾನ
ಮನ್ನಿಸೆನ್ನ ತಪ್ಪು ಒಪ್ಪುಗಳನು ಕರುಣೆಯಿಂದಲಿ ಓ..ಪತಿತ ಪಾವನ
ಅಂತರಂಗದಲ್ಲಿ ನೆಲೆಸಿ ಎನ್ನ ಅತ್ಮಶುದ್ಧಿ ಮಾಡೋ ಓ.. ಗೀತಾಚಾರ್ಯ
ಅರಸ ಮುನಿದರೆಂತು ಗತಿಯು ಪ್ರೆಜೆಯದು ಹೇಳು ಓ..ಪುರುಷೋತ್ತಮ
ನಿನ್ನ ನೆನಪುಗಳು ಇಲ್ಲದ ಹಗಲು ಇರುಳುಗಳಿಲ್ಲ ಓ..ಮುಕುಂದ
ಪ್ರೀತಿ ಪ್ರೇಮದ ಪಾಠ ಜಗಕೆ ಸಾರಿದ ಜಗದೋದ್ಧಾರ.. ರಾಧರಮಣ
ಸದಾ ಮಂದಹಾಸದ ಮನೋಹರ ಕಾಂತಿಯವನು ನೀ..ಗೋಪಿಕಾ ವಲ್ಲಭ
ಹೇಳುವುದಿದೆ ಮನದ ತುಡಿತ ನೂರು, ತೆರೆದಿಡುವುದಿದೆ ಭಾವ ನೂರು..ಮತ್ತೆ ಪತ್ರ ಬರೆವೆ ಓ…ಗಿರಿಧರ
ಇಂತಿ ನಿನ್ನ
ಉಮಾ ಭಾತಖಂಡೆ.