ಅಪಘಾತವೂ ಒಂದು ಉದ್ದಿಮೆಯೇ
ಭರ್ಜರಿ ಹೆದ್ದಾರಿಯಲ್ಲಿ ಒಂದು ಅಪಘಾತ. ಅದೂ ರಾತ್ರಿ 9.30ರ ಸುಮಾರು ಜರುಗಿದರೆ ಅನ್ನುವ ವಿಚಾರ, ಅನುಭವ ನೆನಸಿಕೊಂಡಾಗ, ಒಂದು ರೀತಿಯ ತಲ್ಲಣ, ಭಯ, ಹೆದರಿಕೆ ಮಾಮೂಲು. ಚಲನಚಿತ್ರಗಳಲ್ಲಿ ತೋರಿಸುವ ಕೊನೆಯ ಪೊಲೀಸ್ ಪ್ರವೇಶ ಮತ್ತು ಯು ಆರ್ ಅಂಡರ್ ಅರೆಸ್ಟ್! ಅನ್ನುವ ದೃಶ್ಯ ಸಹ ಮಾಮೂಲು. ಆದರೆ ಚಲನಚಿತ್ರದಲ್ಲಿ ಅದು ಅಷ್ಟು ಪರಿಣಾಮ ಬಿರುವುದಿಲ್ಲ. ಆದರೆ ಅಪಘಾತವಾದಾಗ ಹಾಗಿರುವುದಿಲ್ಲ. ಅದರಲ್ಲಿ ಮೊದಲ ಬಾರಿ ಇದ್ದರಂತೂ ಮುಗಿದು ಹೋಯ್ತು.
ಎಷ್ಟೊಂದು ವಿಧಿಗಳು, ಎಷ್ಟೊಂದು ವಿಧಾನಗಳು ಎಷ್ಟೊಂದು ಅಡಚಣೆಗಳು, ಸಾರ್ವಜನಿಕರ ವ್ಯವಸ್ಥೆ ಪೂರ್ವಕ ಗೊಂದಲಗಳು, ಸಹಕಾರ, ಶೋಷಣೆ, ಗದ್ದಲದ ಫಾಯದೆ, ಕಳ್ಳತನಗಳು. ಪೊಲೀಸರ ಅಸಹಾಯಕತೆ, ಕುಡಿದಿದ್ದರೂ ಹಿಡಿಯಲಾಗದ ಉಪಕರಣಗಳ ಅಭಾವ, ವಿಧಿ ವಿಧಾನಗಳ ಬಂಧನ, ಕುರುಡು ಜಾಣತನಗಳ ನಡುವೆ, ಕುಡಿದವರ ಕಣ್ಮರೆಗೆ ಮೂಕ ಸಾಕ್ಷಿಯಾಗುವುದು.
ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು ಪ್ರತಿ ವರ್ಷ ಹೆಚ್ಚಾಗುತ್ತಿವೆ. ಟ್ರಾಫಿಕ್ ಇಂಜನೀಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿಷಯ ಬರೀ ಪರೀಕ್ಷೆ ಪಾಸಾಗುವ ಡಿಗ್ರಿ ಅಥವಾ ಡಿಪ್ಲೊಮಾ ವಿಷಯಗಳಾಗಿವೆ. ಅನುಷ್ಠಾನ ಮಾತ್ರ ಶೂನ್ಯ ಎಲ್ಲವೂ ಸರಿಯಾಗಿದ್ದರೆ ಅವು ಟಿiಛಿe ರಸ್ತೆಗಳು. ಅವೈಜ್ಞಾನಿಕ ರಸ್ತೆ ಅಡೆ ತಡೆಗಳು, ಉಬ್ಬುಗಳು, ಹೆದ್ದಾರಿಗಳನ್ನು ಮತ್ತು ಸೇವಾ ರಸ್ತೆಗಳನ್ನು ಬೇರ್ಪಡೆಗಳು, ಜನವಸತಿ ಪ್ರದೇಶಗಳಲ್ಲಿ ಸಾರಿಗೆ ನಿಯಂತ್ರಣ, ಸರಿಯಾಗಿ ನೀರು ಪಕ್ಕದ ಗಟಾರುಗಳಿಗೆ ಹರಿದುಕೊಂಡು ಹೋಗುವ ವ್ಯವಸ್ಥೆ, ತಿರುವುಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ವಿಶೇಷ ಗಮನವಿಟ್ಟು ದಪ್ಪ ಮಾಡುವುದು, ರಸ್ತೆಗಳಲ್ಲಿ ಗುಂಡಿಗಳಾದಾಗ ಹಾಗೆ ನಿರ್ವಹಿಸಿಕೊಳ್ಳುವುದು ಜಂಕ್ಷನ್ ಗಳಲ್ಲಿ ಸಾರಿಗೆ ನಿಯಂತ್ರಣ, ಹೀಗೆ ಏನೆಲ್ಲ ಮಾಡಬಹುದು ಅನ್ನುವ ಬಗ್ಗೆ ವಿಚಾರ ಮೂಡುತ್ತವೆ.
ಕಣ್ಣಿಗೆ ಕಾಣುವ ಅಪಘಾತದ ಹಿಂದೆ ಏನೆನೆಲ್ಲಾ ಇರುತ್ತದೆ ಅಥವಾ ಯಾವ ಯಾವ ಬಲಗಳು, ಯಾವ ಸಂಬಂಧಗಳ ನಡುವೆ ಬೆಸುಗೆ ಮತ್ತು ಬಿರುಕು ಮೂಡುತ್ತದೆ ಅನ್ನೋದು ಒಂದು ಕುತೂಹಲ ಕೆರಳಿಸುವ ಸಂಗತಿ. ಹಾಗೆಯೇ ಅಪಘಾತದ ಸಮಯ, ಪ್ರದೇಶ, ಭಾಷೆ, ವಾಹನಗಳ ಟೈಪುಗಳು, ಪ್ರಯಾಣಿಕರು, ಹಾದಿಹೋಕರು, ಅವರ ಆರ್ಥಿಕ ಮಟ್ಟ, ಜಾತಿ ಎಲ್ಲವೂ ತಮ್ಮ ಪ್ರಭಾವ ಬೀರೇ ಬೀರುತ್ತವೆ. ಅಪಘಾತದಲ್ಲಿ ಸಾವು ನೋವು ಸಂಭವಿಸಿದೆಯೇ, ಆಗ ಏನು ಮಾಡುವುದು, ಬರೀ ವಾಹನಗಳ ಡಿಕ್ಕಿಯಾಗಿದ್ದರೆ ವಾಹನದ ಸ್ಥಿತಿ ಚಲಿಸುವಂತೆ ಇವೆ ಇಲ್ಲವೋ, ಅಪಘಾತದಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಇದರಲ್ಲಿ ಗದ್ದಲಗಳ ನಡುವೆ ಕಳ್ಳತನ ಮಾಡುವುದು ಧಿಗ್ ಬಂಧನ ಹಾಕುವುದು ಗುಂಪಿನಲ್ಲಿಯ ನಾಜೂಕಯ್ಯಗಳು, ಮತ್ತು ರಸ್ತೆಯ ವಿನ್ಯಾಸ, ಅಡೆ ತಡೆಗಳ ಅವೈಜ್ಞಾನಿಕತೆ ಪೊಲೀಸರ ಉಸ್ತುವಾರಿ, ಶಿಫಾರಸ್ಸುಗಳ ಸೂಚನೆ ಬರುತ್ತದೆ ಅಥವಾ ಇಲ್ಲವೋ ಅನ್ನುವುದು ಸಂಶಯ. ತಪ್ಪಿಲ್ಲದವರೂ ಸಹ ಅನುಭವಿಸುವ ಯಾತನೆಗಳನ್ನು ಗಮನಿಸಿದಾಗ ಅದು ಅವರವರ ದೈವ ಅಥವಾ ದುರಂತವೋ ಆಗುವುದೂ ಸಹ ಇಂಡಿಯಾದ ಸಾಮಾನ್ಯ ಅನುಭವ ಮತ್ತು ಅದಕ್ಕೆ ಪ್ರಾದೇಶಿಕತೆ ಇಲ್ಲ.
ಇನ್ಸುರೆನ್ಸ್, ಕಾನೂನು, ಗ್ಯಾರೇಜಿನವರು, ದವಾಖಾನೆ ಡಾಕ್ಟರುಗಳು, ಅವರುಗಳು ಸಹ ಈ ಅಪಘಾತಗಳ ಸುತ್ತ ಮುತ್ತ ಇರುವವರೆ ಮತ್ತು ಬರುವರೆ ಯಾವುದೇ ಕ್ಷಣದಲ್ಲಿ. ನಮ್ಮ ಭಾರತದಲ್ಲಿ ಕೋರ್ಟ್ ಕಚೇರಿಯೆಂದರೆ ಒಂದು ರೀತಿಯ ದ್ರಾವಿಡ ಪ್ರಾಣಾಯಾಮವೇ. ಇಲ್ಲಿ ಯಾವ ಸರ್ಕಾರದ ಯಾವ ಸಕಾಲಗಳು ಇಲ್ಲವೇ ಇಲ್ಲ. ಅಪಘಾತ ಒಂದು ಕ್ಷಣದಲ್ಲಿ ಆದರೂ ಸವರಿಸಿಕೊಳ್ಳುವುದು ವರ್ಷಗಳೂ ಸವೇದರೂ ಆಗುವುದಿಲ್ಲ. ಇದನ್ನರಿತ ಬುದ್ದಿವಂತರು ತಮ್ಮದೇ ಆದ ಮಿಲಾಪಿಗಳನ್ನು ಸಮವಸ್ತ್ರಧಾರಿಗಳಿಂದಲೋ ಅಥವಾ ಇಂಥಹ ಅವಕಾಶಗಳಿಗಾಗಿ ಕಾಯುತ್ತಿರುವ ಮಧ್ಯವರ್ತಿಗಳ ಮೂಲಕ ಮಾಡಿಸಿಕೊಳ್ಳಬೇಕು. ಇಂಥವರು ಇದ್ದೇ ಇರುತ್ತಾರೆ. ದೈವದ ಇಚ್ಛೆ ಇದ್ದಲ್ಲಿ ನಿಮಗೆ ಗೊತ್ತಿರುವ ಅಧಿಕಾರಿಗಳ ಸ್ನೇಹಜಾಲವೋ ಸ್ವಯಂ ಸೇವಾ ವ್ಯಕ್ತಿಗಳು ದೇವರೇ ಕಳಿಸಿದ ಅನ್ನುವಂತೆ ಬರುವ ಸಂಭವವೂ ಇರುತ್ತದೆ ಅದು ಅವರವರ ದೈವ.
ಅಪಘಾತದಲ್ಲಿ ಇದ್ದವರು, ಚಾಲಕರು ಒಂದು ವೇಳೆ ಕುಡಿದಿದ್ದರೆ, ಚಾಲಕನಿಗೆ ಲೈಸನ್ಸ್ ಇರದಿದ್ದರೆ ಚಾಲಕ ಬದಲಾಗಿ ಮತ್ತೊಬ್ಬ ಬರುವ ಸಾಧ್ಯತೆ ಎಲ್ಲವೂ ಸಾಧ್ಯ. ನಮ್ಮಲ್ಲಿ ಹಿಂದಿನ ಜನ್ಮದಲ್ಲಿ ಏನಾದರೂ ಪಾಪ ಮಾಡಿದ್ದರೆ ಮಾತ್ರ ಪೊಲೀಸ್ ಠಾಣೆ, ಕೋರ್ಟ್, ಆಸ್ಪತ್ರೆಗಳ ಭೇಟಿ ಮಾಡುವುದು ಅನ್ನುವ ಸಿದ್ಧಾಂತ ಈ ನಮ್ಮ ಭಾರತದಲ್ಲಿ ಸಿದ್ಧವಾಗಿದೆ. ಮತ್ತೆ ನೆನಪಾಗುವುದು ನಮ್ಮ ಕರ್ಮ ಸಿದ್ಧಾಂತವನ್ನೇ ಆಸರೆಯನ್ನು ಮಾಡಿಕೊಳ್ಳುವುದು ಅನಿವಾರ್ಯತೆಯ ಅಂಶ. ಯಾಕೆಂದರೆ ವಾಹನ ಚಾಲನೆಯ ತಿಳುವಳಿಕೆ ಮತ್ತು ಪರಿಣತಿ ಎಲ್ಲರಿಗೂ ಅಷ್ಟೇ ಪ್ರಮಾಣದಲ್ಲಿ ಇರುತ್ತದೆ ಅಂತಾ ಹೇಳಲಿಕ್ಕೆ ಆಗುವುದಿಲ್ಲ ಡ್ರೈವಿಂಗ್ ಲೈಸೆನ್ಸ್ ವಿಷಯದಲ್ಲಿ ಧಾರಾಳ ಪ್ರವೃತ್ತಿ ನಮ್ಮಲ್ಲಿ ಬಹಳ. ಯಾರು ಬೇಕಾದರೂ ಪಡೆಯಬಹುದು ಅನ್ನುವ ಸ್ಥಿತಿ. ಈ ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಸಮಯಕ್ಕೆ ಬೆಲೆ ಇಲ್ಲ. ಕಾಯುವುದು, ಕಾಯುವುದು ಕಾದು ಕಾದು ತಲೆ ಬಿಸಿ ಮಾಡಿಕೊಳ್ಳುವುದು ಸುಸ್ತಾಗುವುದು ಏನಾದರೂ ಆಗಲಿ ಅನ್ನುವ ಕಾಂಪ್ರಮಾಯಿಜ್ಗೆ ತಯಾರಾಗುವುದು ಒಂದು ರೀತಿಯಿಂದ ಅತ್ಯಾಚಾರ ಮಾಡಿಸಿಕೊಳ್ಳುವುದು ಅನಿವಾರ್ಯವಾದಾಗ ಅದನ್ನು ಇಂಜೋಯ್ ಮಾಡು ಅನ್ನುವ ಅರ್ಥದ ಇಂಗ್ಲಿಷ್ ವಾಕ್ಯ ನೆನಪಾಗುತ್ತದೆ. ನಮ್ಮ ದೇಶದಲ್ಲಿ ಅಪಘಾತವೂ ಒಂದು ಲಾಭದ ಉದ್ದಿಮೆಯಾಗುತ್ತದೆ. ರಸ್ತೆ ಬದಿಯ ಊರು, ಹಳ್ಳಿಗಳು ಇಷ್ಟು ಬದಲಾಗಿವೆ ಅಂದರೆ ಅವೆಲ್ಲವೂ ಹಣ ಮಾಡಲು, ಕದಿಯಲು ಅವಕಾಶ ಕೇಂದ್ರಗಳಾಗುತ್ತವೆ. ಅಪಘಾತಗಳಲ್ಲಿ ಸಾವಾದಾಗಂತೂ ಇದು ಮಾಮೂಲು. ಸಂಬಂಧಪಟ್ಟ ಎಲ್ಲರಿಗೂ ಅವರವರ ವಿಚಾರಗಳೇ ಇನ್ವೆಸ್ಟ್ಮೆಂಟ್ಗಳು. ಇಲ್ಲಿ ಯಾರದೋ ಮದುವೆಯಲ್ಲಿ ಉಂಡವನೆ ಜಾಣ ಎನ್ನುವಂತಾಗಿದೆ. ಕೇಸು ಮಾಡಬೇಕೋ, ಮಾಡಬಾರದೋ, ಚೌಕಾಸಿಗಳು, ಅಧಿಕಾರ ಸ್ಥಾನ, ಜಾತಿ ಭಾಷೆ, ಹಣ ಎಲ್ಲವೂ ಕೂಡಿ ಒಂದು ರೀತಿಯ ವಿಶಿಷ್ಟವಾದ ಬ್ಲೆಂಡ್ ಅದೇ ವ್ಯವಸ್ಥೆಯ ಬ್ಲೆಂಡ್ರರ್ಸ್ ಪ್ರೈಡ್. ಇಂಜೋಯ್ ಮಾಡಿ!