ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು, ಜೆ. ಎನ್. ಬರ್ನ್ ಸ್ಟಿನ್ ಎಂಬುವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದನ್ನು ಶ್ರೀನಿವಾಸ ವೈದ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀನಿವಾಸ ವೈದ್ಯರು ‘ಇದು ನನ್ನ ಮೊದಲ ಅನುವಾದ’ ಎಂದಿದ್ದಾರೆ. ಇಡೀ ಕಥೆಯಲ್ಲಿ ಹುಂಜ, ಮತ್ತೆ ಮತ್ತೆ ಪ್ರಸ್ತಾಪಗೊಳ್ಳುವ ಬಾರದ ಪತ್ರ,ಕರ್ನಲ್ ನ ಮತ್ತು ಇತರರ ಆರೋಗ್ಯ, ಅನಾರೋಗ್ಯ ಇವೆಲ್ಲ ಕವಿತೆಯೊಂದರ ಸಂಕೇತ, ಪ್ರತಿಮೆಗಳಂತೆ ಬಳಕೆಯಾಗಿವೆ. ಹೆಸರಿಲ್ಲದ ಊರಿನ ಹೆಸರಿಲ್ಲದ ನಾಯಕನ ಕಥೆ ಲ್ಯಾಟಿನ್ ಅಮೆರಿಕದ, ಅದನ್ನೂ ಮೀರಿ ಅಸಮಾನ ಮನುಷ್ಯ ಸಮಾಜದ, ಅದನ್ನೂ ಮೀರಿ ಮನುಷ್ಯ ಸಾಮಾನ್ಯನ ಬದುಕಿನ ಕಥೆಯಾಗುವಂತೆ ಹೇಗೆಲ್ಲ ಹಬ್ಬುತ್ತದೆ, ಅನುಭವವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ
ಈ ನೀಳ್ಗಥೆಯ ‘ಕಥೆ’ ಒಂದು ವಾಕ್ಯದಲ್ಲಿ ಹೇಳಬಹುದಾದದ್ದು. ಮಾರ್ಷಲ್ ಲಾ ಹೇರಿರುವ ಪುಟ್ಟ ಹಳ್ಳಿಯೊಂದರಲ್ಲಿ, ಮಗನನ್ನು ಕಳೆದುಕೊಂಡ ಇಳಿವಯಸ್ಸಿನ ಯುದ್ಧವೀರ ಕರ್ನಲ್ (ಮತ್ತು ಅವನ ಅಸ್ತಮಾ ಪೀಡಿತ ಹೆಂಡತಿ) ಸರ್ಕಾರದಿಂದ ಬರಬೇಕಾದ ಪಿಂಚಣಿಯ ಹಣಕ್ಕಾಗಿ ಅರುವತ್ತು ವರ್ಷಗಳಿಂದ ಕಾಯುತ್ತ ಇದ್ದು ಮುಂದೆ ದಾರಿ ಕಾಣದ ಕ್ಷಣದಲ್ಲಿ ಬೈಗುಳ ಮಾತು ಹೇಳುವುದರೊಂದಿಗೆ ಮುಗಿಯುತ್ತದೆ. ಗ್ರೀಕ್ ದುರಂತ ನಾಟಕಗಳಲ್ಲಿ ಮುಖ್ಯ ಕ್ರಿಯೆಗಳೆಲ್ಲ ರಂಗದಿಂದಾಚೆಗೇ ನಡೆಯುವಂತೆ ಇಲ್ಲಿನ ಕಥೆಯಲ್ಲೂ ಮುಖ್ಯ ಘಟನೆಗಳೆಲ್ಲ ನೆನಪುಗಳಾಗಿ, ಭರವಸೆ, ಆಸೆ, ಹಂಬಲಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ.
ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ
$0.72 Original price was: $0.72.$0.43Current price is: $0.43.
ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ –
ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು, ಜೆ. ಎನ್. ಬರ್ನ್ ಸ್ಟಿನ್ ಎಂಬುವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದನ್ನು ಶ್ರೀನಿವಾಸ ವೈದ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀನಿವಾಸ ವೈದ್ಯರು ‘ಇದು ನನ್ನ ಮೊದಲ ಅನುವಾದ’ ಎಂದಿದ್ದಾರೆ. ಇಡೀ ಕಥೆಯಲ್ಲಿ ಹುಂಜ, ಮತ್ತೆ ಮತ್ತೆ ಪ್ರಸ್ತಾಪಗೊಳ್ಳುವ ಬಾರದ ಪತ್ರ,ಕರ್ನಲ್ ನ ಮತ್ತು ಇತರರ ಆರೋಗ್ಯ, ಅನಾರೋಗ್ಯ ಇವೆಲ್ಲ ಕವಿತೆಯೊಂದರ ಸಂಕೇತ, ಪ್ರತಿಮೆಗಳಂತೆ ಬಳಕೆಯಾಗಿವೆ. ಹೆಸರಿಲ್ಲದ ಊರಿನ ಹೆಸರಿಲ್ಲದ ನಾಯಕನ ಕಥೆ ಲ್ಯಾಟಿನ್ ಅಮೆರಿಕದ, ಅದನ್ನೂ ಮೀರಿ ಅಸಮಾನ ಮನುಷ್ಯ ಸಮಾಜದ, ಅದನ್ನೂ ಮೀರಿ ಮನುಷ್ಯ ಸಾಮಾನ್ಯನ ಬದುಕಿನ ಕಥೆಯಾಗುವಂತೆ ಹೇಗೆಲ್ಲ ಹಬ್ಬುತ್ತದೆ, ಅನುಭವವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ
About this Ebook
Information
Additional information
Category | |
---|---|
Author | |
Publisher | |
Translator | Shrinivas Vaidya |
Language | Kannada |
Book Format | Ebook |
Pages | 82 |
Year Published | 2013 |
ISBN | 978-93-81822-27-2 |
Reviews
Only logged in customers who have purchased this product may leave a review.
Reviews
There are no reviews yet.