ಚಿಂತೆ ಸುಟ್ಟಿತೆನ್ನ ಕಳೆದ
ಪಾಪ ಕರ್ಮವ
ಚಿಂತೆ ಧಹಿಸಿತೆನ್ನ ದುರಹಂಕಾರವ
ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ
ಚಿಂತೆ ಬಡಿದೆಬ್ಬಿಸಿತೆನ್ನ ಆತ್ಮಸ್ಥೈರ್ಯ
ಚಿಂತೆ ತೋರಿತು ಮೂಡಣದಲಿ ನವಮಾರ್ಗ
ಚಿಂತೆಯ ಮಥನದಿಂದಾಯಿತು
ಹೊಸ ಚಿಂತನೆ
ಚಿಂತೆಯಿಂದಾಯಿತೆನ್ನ ಪುನರ್ಜನ್ಮ
ಚಿಂತೆ ಏರಿಸಲಿಲ್ಲ ಎನಗೆ ಚಿತೆಯ
ಚಿಂತೆ ಶಬ್ಧಕಾಗಲಿ ಇನ್ನು ಹೊಸ ಚಿಂತನೆಯು.
– ಉಮಾ ಭಾತಖಂಡೆ
4 Comments
ಚಿಂತೆ ಸೂಸಿತೊಂದು ಹೊಂಬೆಳಕ ಕಿರಣ
ಸಾಮಾನ್ಯ ವಾಗಿ ಚಿಂತೆ ಎಲ್ಲರನ್ನು ಕಾಡುತ್ತೆ. ಆದರೆ ಇಲ್ಲಿ ಕವಿಗೆ ಹೊಂಬೆಳಕ ಕಿರಣವೂ ಆಗಿದೆ. ಸುಂದರ.
ಮೇಡಂ ವಂದನೆಗಳು
ಚಿಂತೆಯನು ಅನೇಕ ಮಗ್ಗಲುಗಳನ್ನು ಬಹಳ ಸೊಗಸಾಗಿ ಮತ್ತು ಅರ್ಥಗರ್ಭಿತವಾಗಿ ಓದುಗನ ಮುಂದಿಡುವ ಕವನ.
ತುಂಬಾ ಅರ್ಥಪೂರ್ಣವಾಗಿ ಮನಮುಟ್ಟುವ ಕವನ…
ನಿಜ….ಚಿಂತೆ ಜೀವನದಲ್ಲಿ ಮುನ್ನಡೆಯಲು ಒಂದು ಹಾದಿ ತೋರಿಸಿತು