ಮಧುರ – ಮಧುರ – ಮಧುರ – ಪುನಃ
“ಈ ಸಂಭಾಷಣೆ… ಈ ಪ್ರೇಮ ಸಂಭಾಷಣೆ…
ಅತಿ ನವ್ಯ….ರಸಕಾವ್ಯ…
ಮಧುರಾ ಮಧುರಾ ಮಧುರಾ….”
……….. …………. ……..
ಎಷ್ಟೇ ಪ್ರಯತ್ನಿಸಿದರೂ
ಆ ಹಳೆಯ ಗ್ರಾಮೋಫೋನ್ ನಲ್ಲಿ
ಹಳೆಯ ಚಿತ್ರಗೀತೆ ತುಂಡು ತುಂಡಾಗಿ
ಇಷ್ಟೇ ಪುನಃ ಪುನಃ ಬರುತ್ತಿತ್ತು…
ನಂತರ cut…cut…cut..
ಸಂಗೀತವೆಂದರೇನೇ ಮಧುರ
ಎಂಬ ಒಂದು ಕಾಲವಿತ್ತು…
ಧ್ವನಿಗೆ ಹಿನ್ನೆಲೆಯಾಗಿ ವಾದ್ಯವಿರುತ್ತಿತ್ತು…
ಈಗ ವಾದ್ಯಗಳ ಭರಾಟೆಗೆ ಅಲ್ಲಲ್ಲಿ
ಒಂದಿಷ್ಟು ಧ್ವನಿ….ಅದೂ ಕರ್ಕಶ….
ಹೀಗಾಗಿ ಗ್ರಾಮೋಫೋನೂ
ತುಂಡಾಗಿ “ಗ್ರ್ಯಾಮಿ”ಯಾಗಿ
ಅದೇ award ಆಗಿ ವಿಶ್ವವ್ಯಾಪಿ
ಸಂಗೀತವಾಗಿ ಮೆರೆಯುತ್ತಿದೆ….